ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಚಟುವಟಿಕೆಗಳು ಕಾರ್ಮಿಕರಿಲ್ಲದೆ ಸ್ಥಗಿತಗೊಂಡಿವೆ. ಇದರ ನೈಜ ಕಾರಣ ಕೇಳಿದರೆ ನಿಜಕ್ಕೂ ಅಚ್ಚರಿಪಡಬೇಕಷ್ಟೆ. ಅಷ್ಟಕ್ಕೂ ಕಾರ್ಮಿಕರ ಕೊರತೆ ಸೃಷ್ಟಿಯಾಗಿದ್ದು ಏಕೆ? ಇದರ ಹಿಂದಿನ ನೈಜ ಕಾರಣ ಏನು? ಇಲ್ಲಿದೆ ವಿವರ.
ಬೆಂಗಳೂರು, ಏಪ್ರಿಲ್ 18: ಬೆಂಗಳೂರಿನಲ್ಲಿ (Bengaluru) ಕಳೆದ ಮೂರು ವಾರಗಳಿಂದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಾರ್ಮಿಕರು (No Workers For Construction) ಸಿಗುತ್ತಿಲ್ಲ. ದಿನಗೂಲಿ ಕೆಲಸದವರಂತೂ ಕೈಗೇ ಸಿಗುತ್ತಾ ಇಲ್ಲ ಇದಕ್ಕೆ ಕಾರಣ, ಲೋಕಸಭಾ ಚುನಾವಣೆ (Due To Lok Sabha Election)! ನಾಲ್ಕೈದು ಗಂಟೆ ಪ್ರಚಾರ ಮಾಡಿದ್ರೆ ಕೈ ತುಂಬಾ ಕಾಸು, ಹೊಟ್ಟೆ ತುಂಬ ಬಿರಿಯಾನಿ, ರಾತ್ರಿಗೆ ಕ್ವಾಟರ್ ಮದ್ಯ ಸಿಗುತ್ತದಂತೆ. ಹೀಗಾಗಿ ಕಾರ್ಮಿಕರು ಕೆಲಸ ಬಿಟ್ಟು ಪ್ರಚಾರ ಕಾರ್ಯದತ್ತ ಆಕರ್ಷಿತರಾಗಿದ್ದಾರೆ.